School Prayer

ಓಂ ತತ್ ಸತ್

ಓಂ ತತ್ ಸತ್ ಶ್ರೀ ನಾರಾಯಣ ತೂ

ಪುರುಷೋತ್ತಮ ಗುರು ತೂ

ಸಿದ್ಧ ಬುದ್ಧ ತೂ

ಸ್ಕಂದ ವಿನಾಯಕ ಸವಿತಾ ಪಾವಕ ತೂ

ಬ್ರಹ್ಮ ಮಜ್ದ ತೂ

ಯಹ್ವ ಶಕ್ತಿ ತೂ ಏಸು ಪಿತಾ ಪ್ರಭು ತೂ

ರುದ್ರ ವಿಷ್ಣು ತೂ

ರಾಮಕೃಷ್ಣ ತೂ ರಹೀಮ ತಾವೋ ತೂ

ವಾಸುದೇವ ಗೋ ವಿಶ್ವರೂಪ ತೂ

ಚಿದಾನಂದ ಹರಿ ತೂ

ಅದ್ವಿತೀಯ ತೂ ಅಕಾಲ ನಿರ್ಭಯ

ಆತ್ಮಲಿಂಗ ಶಿವ ತೂ

 

ಕಲಿಸು ಗುರುವೆ ಕಲಿಸು

ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು

ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು     (2 ಸಲ)  

ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು  (2 ಸಲ)

ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು  (2 ಸಲ)

ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು||

 

ಬೆವರಿಳಿಸಿ ಗಳಿಸಿದ ಒಂದು ಕಾಸು ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು

ಲಲಲಲ ಲಲಲಲ ಲಲಲಲ ಲಾಲಾಲಾಲಾ

ಬೆವರಿಳಿಸಿ ಗಳಿಸಿದ ಒಂದು ಕಾಸು ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು

ಸೋಲು ಗೆಲುವಿನಲಿ ಸಮ ಚಿತ್ತದಿಂದಿರಲು (2 ಸಲ)

ಶತ್ರುಗಳಿಗೂ ಸನ್ಮಿತ್ರ ನಾಗಿರಲು ಕಲಿಸು (2 ಸಲ)

ಹಸಿರು ಮಲೆ ಹೂವಲಿ ನಾ ಧ್ಯಾನಿಸುವುದ ಕಲಿಸು

ಜಾಣನಾಗಲು ಕಲಿಸುಜಾಣನಾಗಲು ಕಲಿಸು||1||

 

ಜಗವೆಲ್ಲ ಒಂದಾಗಿ ಜರಿದರು ಸರಿಯೆ ನನ್ನನ್ನೆ ನಾ ನಂಬುವ ಬಗೆ ನೀ ಕಲಿಸು

ಲಲಲಲ ಲಲಲಲ ಲಲಲಲ ಲಾಲಾಲಾಲಾ

ಜಗವೆಲ್ಲ ಒಂದಾಗಿ ಜರಿದರು ಸರಿಯೆ ನನ್ನನ್ನೆ ನಾ ನಂಬುವ ಬಗೆ ನೀ ಕಲಿಸು

ಅಳುವಿನಲಿ ಅವಮಾನ ಇಲ್ಲವೆಂಬುದು ಕಲಿಸು

ನನ್ನನ್ನೆ ನಾ ನೋಡಿ ನಗುವುದನು ಕಲಿಸು

ಮಾನವಿಯತೆಯಲಿ ನಾ ಮರುಗುವುದನು ಕಲಿಸು  (2 ಸಲ)

ಮಾನವೀಯತೆಯಲಿ ನಾ ಕರಗುವುದು ಕಲಿಸು

ಜಾಣನಾಗಲು ಕಲಿಸುಜಾಣನಾಗಲು ಕಲಿಸು||2||

 

  

तुम्ही हो माता पिता तुम्ही हो - प्रार्थना 

तुम्ही हो माता, पिता तुम्ही हो
तुम्ही हो बंधू, सखा तुम्ही हो
तुम्ही हो माता, पिता तुम्ही हो
तुम्ही हो बंधू, सखा तुम्ही हो

तुम ही हो साथी, तुम ही सहारे
कोई ना अपना सिवा तुम्हारे
तुम ही हो साथी, तुम ही सहारे
कोई ना अपना सिवा तुम्हारे

तुम ही हो नईया, तुम ही खिवईया
तुम ही हो बंधू, सखा तुम ही हो

तुम ही हो माता, पिता तुम्ही हो
तुम ही हो बंधू, सखा तुम्ही हो

जो खिल सके ना वो फूल हम हैं
तुम्हारे चरणों की धूल हम हैं
जो खिल सके ना वो फूल हम हैं
तुम्हारे चरणों की धूल हम हैं

दया की दृष्टि, सदा ही रखना
तुम ही हो बंधू, सखा तुम्ही हो

तुम्ही हो माता, पिता तुम्ही हो
तुम्ही हो बंधू, सखा तुम्ही हो
तुम्ही हो माता, पिता तुम्ही हो
तुम्ही हो बंधू, सखा तुम्ही हो

 

       || ಶಾರದಾ ಸ್ತುತಿ ||
ತಾಯಿ ಶಾರದೆ ಲೋಕ ಪೂಜಿತೆ

 ಜ್ಞಾನದಾತೆ ನಮೋಸ್ತುತೇ         || ||

 ಪ್ರೇಮದಿಂದಲಿ ಸಲಹು ಮಾತೆ

ನೀಡು ಸನ್ಮತಿ ಸೌಖ್ಯದಾತೆ             ||. .||

 

ಆಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು 

ಹೃದಯ ಮಂದಿರದಲ್ಲಿ ನೆಲೆಸು

ಚಿಂತೆಯ ಅಳಿಸು ಶಾಂತಿಯ ಉಳಿಸು         || 1 ||

 

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ

ನಿನ್ನ ಕರುಣೆಯ ಬೆಳಕಲೆಮ್ಮ

ಬಾಳನು ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ || 2 || 

 

 ಒಳ್ಳೆ ಮಾತುಗಲಾಡಿಸು  ಒಳ್ಳೆ ಕೆಲಸವ ಮಾಡಿಸು

ಒಳ್ಳೆ ದಾರಿಯಲೆಮ್ಮ ನಡೆಸು

ವಿದ್ಯೆಯ ಕಲಿಸು ಆಸೆ ಪೂರೈಸು || 3 ||